ಶನಿವಾರ, ಜುಲೈ 23, 2016

ಚಿತ್ರ-ಕಾವ್ಯ: ಬಿಗಿದು ಕಟ್ಟಿದ ತಂತಿ







ಹಾ!
ಜೀವನ, ಏನೆನ್ನಲಿ
ಬಿಗಿದು ಕಟ್ಟಿದ ತಂತಿಯಲ್ಲದೆ
ಮತ್ತಿನ್ನೇನು?
ಅತ್ತ ಕಡಿಯುವುದೂ ಇಲ್ಲ
ಇತ್ತ ನೇರ ನಿಂತ ದಿನವಿಲ್ಲ


ಹೂಂ.. ಹೌದು,
ಅಲ್ನೋಡಿ, ಅವೆಲ್ಲಾ ನನ್ನ ಪ್ರೀತಿಯ ಬಣ್ಣಗಳು
ಕ್ಲಿಪ್ಪಿಗೊಂದರಂತೆ ಕಚ್ಚಿ ಕೂತಿವೆಯಲ್ಲ?
ಅವುಗಳು ಮಾಸದಿರಲು
ನಾನು ಸುಡುಬಿಸಿಲಿಗೆ ಬೆನ್ನು ಕೊಟ್ಟು ನಿಂತೆ
ಜಡಿಮಳೆಗೂ ಮುಖವೊಡ್ಡಿ ಗಳಗಳನೆ ಅತ್ತೆ
ಹ್ಹಹ್ಹ.. ಇಷ್ಟಕ್ಕೆಲ್ಲಾ ನಾನು ಕೇಳಬಾರದಲ್ಲ ಭತ್ಯೆ!


ನನ್ನ ಪ್ರಾರ್ಥನೆಯೊಂದೆ,
ಎಲ್ಲಾ ಬಣ್ಣಗಳು ನನಗಂಟಿಕೊಂಡಿದ್ದಷ್ಟು ದಿನ
ನಾನಿರಬಲ್ಲೆ
ಅವುಗಳು ಎದ್ದು ಹೋದ ದಿನ
ತಂತಿಯನ್ನು ಕಡಿದು ಅವರ ಕೈಗಿತ್ತು,
ಮುರಿದು ಬೀಳುವ ಕಂಬಕ್ಕೆ ಕಟ್ಟಿಕೊಳ್ಳಲು ಹೇಳಿ, ಪ್ಲೀಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ