ಬಾ ನಾವಿಬ್ಬರೂ
ದೋಸ್ತಿಗಳಾಗೋಣ
ನೀನು ಸ್ವಲ್ಪ ಆಟಿಕೆ
ಕೆಳಗಿಡು
ಮತ್ತೆ ಕೈ ಕೊಡು
ಈ ಗಲ್ಲಿಯೊಮ್ಮೆ ಸುತ್ತಿ ಬರೋಣ
ಅಬ್ಬಾಜಾನ್ ಹೇಳಿದ್ದರು,
ನೀನು ನಮ್ಮವನಲ್ಲ
ನಿನಗೆ ತಿಳಿದಿರುವುದು
ರಕ್ತದೋಕುಳಿಯದೊಂದೇ ಆಟ
ಹೌದೇ?
ಕಣ್ಣಾಮುಚ್ಚಾಲೆ ಆಟ ನಿನಗೆ
ಗೊತ್ತಿರಬೇಕಲ್ಲ?
ನಾವು ನಾಲ್ವರು, ನೀನೊಬ್ಬ
ಅಡಗಿಕೋ ಇಂದಾದರೂ
ಹುಡುಕುವ ಸುಖ ನಮ್ಮದು
ಬಾ, ನಮ್ಮ ಹೊಲಗಳೀಗ ಖಾಲಿ
ಅಲ್ಲಲ್ಲಿ ಪೆÇಗದಸ್ತಾಗಿ ಬೆಳೆದ
ಹುಲ್ಲ ಮೇಯಲು
ಕುರಿ ಮಂದೆ ಮುಗಿ ಬಿದ್ದಿದೆ
ಒಂದೊಂದನ್ನೆತ್ತಿ ಕೊಡು ನನಗೆ
ಬಿಳಿಯೂ ಕಾಣಲಿ ಕಣ್ಣಿಗೆ
ಕೆಂಪು ಮಾಸಲಿ ತಣ್ಣಗೆ
ಮನಸಾರೆ ನಕ್ಕುಬಿಡು
ಎಷ್ಟು ದಿನಗಳಾದವೋ ಹರುಷ ಕಂಡು
ಬಿಳಿ ಪಾರಿವಾಳಗಳಿವೆ ಮನೆಯಲ್ಲಿ
ನೀನೂ ಒಂದು ಸಾಕಿಬಿಡು..
ಸಾಕಿಬಿಡು..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ