ಭಾನುವಾರ, ಜುಲೈ 27, 2014

ಗ್ರಾಜುವೆಟ್ ಪಾನ್ ವಾಲಾ - 'ಝೀರೊ ಆನಿ ಏಕ್' ಅಂಕಣಾಂತ್ಲೆಂ ಬರಪ್



ಗ್ರಾಜುವೆಟ್ ಪಾನ್ ವಾಲಾ
ಜಿಣಿ ಸತಯ್ತಲಿ ತರೀ ದುಸ್ರ್ಯಾಂಚ್ಯಾ ಬೊಲ್ಸಾಕ್ ಹಾತ್ ಘಾಲ್ಲೊನಾ!

ಬೆಂಗ್ಳುರಾಂತ್ ತುಮಿ ಕಾಂಯ್  ಎಂ. ಜಿ. ರೋಡ್, ಬರ್ಟನ್ ಸೆಂಟರ್ ಬಿಲ್ಡಿಂಗಾ ಬಗ್ಲೆನ್ ಪಾಶಾರ್ ಜಾಲ್ಯಾತ್ ಆಸ್ತೆಲ್ಯಾತ್. ಬಿಝಿ ರಸ್ತೊ, ಸಾಂಜೆಚಿಂ ಪಾವ್ಣೆಂ ಪಾಂಚ್.

ಎಕಾಚ್ಛಾಣೆಂ ಎಕಾ ದಡಂಗ್ ವೆಕ್ತಿನ್ ಎಕಾ ಶಿರ್ಪುಟ್ಯಾ ಚೆಡ್ಯಾಕ್ ಧರ್ಣಿಕ್ ಶೆವ್ಟಿಲೊ. ಚಾರ್ ಜಣ್ ಕುಡ್ಸಾಲೆ. ಕಿತ್ಯಾಕ್ ಗಿ ಕೊಣ್ಣಾ, ಸರ್ಸರಿತ್ ವಾಜಯ್ಲೆಂ!!
 
ಥಂಯ್ಚ್ ಲಾಗ್ಸಾರ್ ಸೈಕಲಾರ್ ಪಾನ್ ವಿಕ್ತೆಲ್ಯಾ ಗ್ರಾಯ್ಕಾನ್ ಮಧೆಂ ಪಡುಂಕ್ ನಾತ್ಲೆಂ ತರ್ ಶಿರ್ಪುಟೊ ಚೆಡೊ ಹದಾ ಜಾತೊ ಕೊಣ್ಣಾ! ತಾಚೆ ವೋಂಟ್ ಘುಟ್ ಲ್ಲೆ, ಕುಂಟಾತಾಲೊ. ಹಾತಾಕ್ ಧರುನ್ ತಾಕಾ ಪಾನ್ ವಾಲಾನ್ ಆಪ್ಲ್ಯಾ ಸೈಕಲಾಲಾಗಿಂ ಬಸಯ್ಲೊ. ಬಗ್ಲೆಚಾ ಆಂಗ್ಡಿಗಾರಾಚಿ ಚಾ ಹಾಡವ್ನ್ ದಿಲಿ. 

ಚೆಡ್ಯಾಕ್ ಪಾನ್ ವಾಲಾನ್ ಬಾರಿಕ್ಸಾಣೆನ್ ಪಳೆಲೆಂ. ವೊಂಟಾವಯ್ರ್ ಮಿಶ್ಯೊ ಫುಟ್ತಲ್ಯೊ ಮಾತ್ರ್. ಹುನೊನಿ ಚಾಯೆಚೊ ಗೊಬ್ಳೊ ತಾಚ್ಯಾ ಹಾತಾಂತ್ ಬಾರೀಕ್ ಕಾಂಪ್ತಾಲೊ. ಹಾಕಾ ಕಿತ್ಯಾ ಮಾಲೆಂಗಾಯ್? ಗಾಳಿಸೊವ್ಯಾ ಸಂಗಿಂ ಪಾನ್ ವಾಲಾಕ್ ಆಯ್ಕಾಲ್ಲೆಂ ಇತ್ಲೆಂಚ್: ಹಾಣೆಂ ಪೊಕೆಟ್ ಮಾರ್ ಲ್ಲಿ! ಭಿರ್ಮತ್, ಬೊವ್ ಶಾ ಚೆಡೊ ಆಸಲ್ಯಾ ಕಾಮಾಂತ್ ಹೆಳ್ ಲ್ಲೊ ನ್ಹಯ್. ಚೆಡ್ಯಾನ್ ಗೊಬ್ಳೊ ಖಾಲಿ ಕೆಲೊ. ತಾಕಾ ಥಂಯ್ ರಾವೊಂಕ್ ಕಾಂಯ್ ಆಸಕ್ತ್ ನಾತ್ಲಿ. ಆಪ್ಣಾಕ್ ಬಚಾವ್ ಕೆಲ್ಲೊ ಕೋಣ್ ಗಾಯ್ ಮ್ಹಣ್ ತೋಂಡ್ ಪಳೆಂವ್ಕೀ ಧಯ್ರ್ ಪಾವನಾಸ್ತಾಂ, ಆನಿಕೀ ಥಂಯ್ ಬಸ್ಲ್ಯಾರ್ ಸವಲಾಂ ಫುಡ್ ಕರುಂಕ್ ಪಡ್ತೆಲಿಂ ಮ್ಹಳ್ಳ್ಯಾ ಭಿಯಾನ್ ಥಂಯ್ಚೊ ನಿಕ್ಳೊಂಕ್ ಪಳೆತಾಲೊ. 

ಪಾನ್ ವಾಲಾಚೊ ಹಾತ್ ತಾಚ್ಯಾ ಭುಜಾಂಚೆರ್ ಬಸ್ಲೊ. 

ಗಿರಾಯ್ಕ್ ಕಾಂಯ್ ಯೆಂವ್ಚೆ ದಿಸಾನಾತ್ಲೆ. ಪಾನ್ ವಾಲಾ ಚೆಡ್ಯಾ ಬಗ್ಲೆನ್ ಬಸ್ಲೊ. 

“ಪಳೆರೆ ಚೆಡ್ಯಾ, ತುಜೆಂ ನಾಂವ್ – ಗಾಂವ್ ವಿಚಾರುಂಕ್ ಮ್ಹಾಕಾ ಅಭಿರೂಚ್ ನಾ. ರಸ್ತ್ಯಾ ವಯ್ಲ್ಯಾಂಕ್ ನಾಂವ್ – ಗಾಂವ್ ಫರಕ್ ಪಡನಾ. ಆಸೊಂ, ತುಂ ಕಿತೆಂಗಿ ಲ್ಹಾನ್ ಭುರ್ಗೊ ದೆಕುನ್ ಮ್ಹಾಕಾ ಭಿರ್ಮತ್ ದಿಸ್ಲಿ. ಕಿತ್ಲೆಂ ಶಿಕ್ಲಾಯ್?”

“ಏಕ್ ವರ್ಸ್”

“ಕಿತೆಂ ಶಿಕ್ಲೊಯ್ ಏಕ್ ವರ್ಸ್!?”

“ಪಿಕ್ ಪೊಕೆಟಿಂಗ್! ಎಕ್ಸುರೊಚ್ ಯೆದೊಳ್ ಹಾಂತುಂ ದೆವೊಂಕ್ ನಾತ್ಲೊಂ. ಆಜ್ ಏಕ್ ಹಾತ್ ಪಳೆಯಾಂ ಮ್ಹಣ್ ಟ್ರೈ ಕೆಲೆಂ..... ಪುಣ್....” ತಾಣೆಂ ಫುಟ್ ಲ್ಲ್ಯಾ ವೊಂಟಾಂಚೆರ್ ಬೋಟ್ ಚರಯ್ಲೆಂ.

ಪಾನ್ ವಾಲಾಕ್ ರಾಗ್ ತಳ್ಮಟ್ಯಾಕ್ ಚಡ್ಲೊ. ಭಿಗ್ದುನ್ ಏಕ್ ವಾಜಯ್ಲೆಂ ಕಾನ್ಸುಲಾಕ್!

ಚೆಡೊ ಶಿರಿಂ ಚುಕ್ಲೊ.ಅನಿರೀಕ್ಷಿತ್ ಪಡ್ ಲ್ಲ್ಯಾ ಥಾಪ್ಡಾನ್ ಪೊಲೊ ಮಿರ್ಮಿರ್ಚ್ಯಾಕೀ ತಾಚೆಂ ಕಾಳಿಜ್ ವೇಗ್ ಚುಕೊನ್ ದಡ್ದಡ್ತಾಲೆಂ. 

“ತಿಣ್ ಕಾಸಾಂಚ್ಯಾ, ಆಶಿ ಗಜಾಲ್ ಮ್ಹಣ್ ಕಳ್ ಲ್ಲೆಂ ತರ್ ತಾಂಚ್ಯಾ ಹಾತಾಂತ್ ಮಾರ್ ಖಾವ್ನ್ ಮೊರ್ತೊಯ್ ಪೆಲ್ಯಾನ್. ಮ್ಹಾಕಾ ಕಿತ್ಯಾ ಪಡೊನ್ ಗೆಲ್ಲೆಂ!”

“ಕ್ಯಾ ಕರುಂ ಸಾಬ್.. ಭುಕ್ ಲಾಗ್ತಾನೇ ಸಾಬ್.. ಬೆಳ್ಶೆಲ್ಲಿ ಕಡಿ ತೊಟ್ಯಾಣ್ತ್ ಭಾಂದುನ್ ದಿಸ್ರೆ ಸಕಾಳಿಂ ಕಚ್ರ್ಯಾ ಡಾಬ್ಬ್ಯಾಂತ್ ಉಡಯ್ತಾತ್ ಪಳೆ... ತಸ್ಲಿ ಕಾಣಿ ಆಮ್ಚಿ. ಪಾಟಿಂ ಫುಡೆಂ ಕೊಣೀ ನಾ. ಹಾಂವ್ ಜಿಣಿ ದ್ವೇಶಿತಾಂ ಸಾಬ್...”
ಪಾನ್ ವಾಲಾ ಲಾಗಿಂ ಜಾಪ್ ನಾತ್ಲಿ. ಪರತ್ ತಾಚೆ ಬಗ್ಲೆಕ್ ಬಸ್ಲೊ ತೊ. 

“ ತುಕಾ ಮ್ಹಜಿ ಕಾಣಿ ಸಾಂಗ್ತಾಂ, ಆಯ್ಕ್” ತಾಚ್ಯಾ ಭುಜಾಂಚೆರ್  ಹಾತ್ ಘಾಲೊ ಪಾನ್ ವಾಲಾನ್. 
 
“ಹಾಂವ್ ವಾರಣಾಸಿ, ಗಾಂವಾನ್. ೧೯೮೨ ಇಸ್ವೆಂತ್ ಗ್ರಾಜುವೇಶನ್ ಜಾಲೆಂ. ಶಿಕ್ಪಾ ತೆಕಿದ್ ಎಕಾ ಧಾಕ್ಟ್ಯಾ ಕಂಪ್ಣೆಂತ್ ಕಾಮ್ ಮೆಳ್ಳೆಂ. ಥೊಡ್ಯಾ ತೆಂಪಾನ್ ದಾವಣಗೆರೆಂತ್ ಬ್ರಾಂಚ್ ಮೆನೆಜರ್ ಜಾಲೊಂ. ಧಾ ವರ್ಸಾಂ ಹ್ಯಾ ಚ್ ಬೆಂಗ್ಳುರಾಂತ್ ತ್ಯಾಚ್ ಕಂಪ್ಣೆಖಾಲ್ ಕಾಮ್ ಕೆಲೆಂ. ಮ್ಹಜೆಂ ಖೊಟೆಂ ನಶೀಬ್, ಮ್ಹಾಕಾ ಶಿತ್ ದಿಲ್ಲಿ ಕಂಪ್ಣಿ ಅವ್ಚಿತ್ ಬುಡ್ಲಿ. ಹಾಂವ್ ವಾಟೆರ್ ಪಡ್ಲೊಂ ಆನಿ ಆತಾಂ ಸುರು ಜಾಲಿ ಮ್ಹಜಿ ಕಾಣಿ....”

ಚೆಡೊ ಆತುರಿತ್ ಜಾಲೊ. “ಹೋ! ತಾಚೆ ಉಪ್ರಾಂತ್ ಪಾನ್ ವಿಕುಂಕ್ ಸುರು ಕೆಲೆಂಯ್ ದಿಸ್ತಾ!” ಸವಾಲ್ ತಾಚೆಂ.
ಪಾನ್ ವಾಲಾನ್ ’ನಾ’ ಮ್ಹಳ್ಳೆಪರಿಂ ತಕ್ಲಿ ಹಾಲಯ್ಲಿ. ತಾಣೆಂ ಮುಕಾರಿಲೆಂ, 
“ತವಳ್ ಮ್ಹಜ್ಯೊ ದೊಗೀ ಧುವೊ ಬಿ. ಬಿ. ಎಮ್ ಕರ್ತಾಲ್ಯೊ ಆನಿ ಪೂತ್ ಇಸ್ಕೊಲಾಕ್ ವೆತಾಲೊ. ಹಾತಾಂತ್ ಕಾಸ್ ನಾಂತ್. ಪುಂಜಾವ್ನ್ ದವರ್ ಲ್ಲೆಂ ಕಾಂಯ್ ನಾ. ಪಾಟಿ-ಫುಡೆಂ ಚಿಂತ್ಲೆಂ ನಾ ಲಜ್ ಯಿ ದಿಸ್ಲಿ ನಾ. ಮಲಬಾರ್ ಗೋಲ್ಡ್ ಕಮರ್ಶಿಯಲ್ ರಸ್ತ್ಯಾರ್ ಏಕ್ ರೆಸ್ಟೊರೆಂತ್ ಆಸಾ. ತಾಚೆ ಮುಕಾರ್ ಏಕ್ ಧಾಕ್ಟೆಂ ಮೇಜ್ ಮಾಂಡುನ್ ಪಾನ್ ವೆಪಾರ್ ಸುರು ಕೆಲೊ. 

ಜಿಣ್ಯೆಕ್ ಮೊಸ್ರಾನ್ ತಡ್ವುಂಕ್ ಜಾವ್ನಾ ದಿಸ್ತಾ! ತೆಂ ರೆಸ್ಟೊರೆಂಟ್ ಥೊಡ್ಯಾಚ್ ದಿಸಾಂನಿ ಬಂಧ್ ಪಡ್ಲೆಂ. ದಾಂಪ್ ಲ್ಲ್ಯಾ ದಿವ್ಳಾ ಮುಕಾರ್ ಫುಲಾಂ ವಿಕುಂಕ್ ಕೋಣ್ ಬಸ್ತಾ?

ಜಿಣೀ ಸತಯ್ತಾಲಿ.. ಚೆಡ್ಯಾ ಜಾಯ್ತೆಂ ಸತಯ್ತಾಲಿ, ವಿಕ್ರಮಾದಿತ್ಯಾಚಾ ಪಾಟಿಕ್ ಲಾಗ್ ಲ್ಲ್ಯಾ ಬೆತಾಳಾಪರಿಂ. ಹಾಂವ್ ಮೊರೊಂಕ್ ನಾ. ಪರತ್ ಉಟುನ್ ಬಸ್ಲೊ. ಟಿಫಿನ್ ವಾಂತ್ಚೆಂ ಕಾಮ್ ಧರ್ಲೆಂ. ಎಕಾ ಟಿಫಿನ್ ಬೊಕ್ಸಾಕ್ ೩೫ ರುಪಯ್. ಮ್ಹಜೊ ಭಾಮ್ ಕಾಮ್ ನಾಸ್ತಾಂ ಕಂಗಾಲ್ ಜಾಲ್ಲೊ. ಟಿಫಿನಾಚ್ಯಾ ಕಾಮಾಮ್ತ್ ಮೆಳ್ ಲ್ಲ್ಯಾ ಲಾಭಾನ್ ಭಾವಾಕ್ ಕೆ. ಆರ್ ಪುರಾಂತ್ ಪಾನ್ ಶೊಪ್ ಘಾಲ್ನ್ ದಿಲೆಂ. ದಿಸಾನ್ದೀಸ್ ತಾಚೆಂ ಬರೆಂ ಜಾಲೆಂ. 

ಮ್ಹಜ್ಯಾ ವಾಂಟ್ಯಾಕ್ ಜಿಣಿ ಮುಸ್ಕು ಘಾಲ್ನ್ ಹಾಸ್ತಾಲಿ!!

ಏಕ್ ದೀಸ್ ಟಿಫಿನ್ ಸಾಗ್ಸಿತಾನಾ ಹಾತಾ ಥಾವ್ನ್ ನಿಸ್ರೊನ್ ಸಗ್ಳೆಂ ಫಾಸ್ಳೊನ್ ಗೆಲೆಂ. ಭಾವಾ ಸರ್ಶಿಂ ಧಾಂವ್ಲೊಂ, ಕುಮ್ಕೆಚೆ ಆಶೆನ್. ತಾಣೆಂ ಮ್ಹಳೆಂ, “ ತುಂ ಎಂ. ಜಿ. ರೊಡಾರ್ ಸೈಕಲಾರ್ ಪಾನ್ ವೀಕ್. ತೆಂಚ್ ಬರೆಂ ತುಕಾ!”
ತಾಚ್ಯಾ ತಾಳ್ಯಾಂತ್ ಭಿರ್ಮತ್ ಆಸ್ಲಿ ವ ನಂಜ್ಯೊ.. ಪಾರ್ಕುಂಕ್ ವೇಳ್ ನಾತ್ಲೊ. 

ಆಬ್ಳೆ ತುಂ ಆಸಾಯ್ ಮ್ಹಜ್ಯಾ ಆಂಗ್ಡಿ ಮುಕಾರ್! ಪುಣ್ ಜಾಣಾಂಯ್ ಗಿ ಚೆಡ್ಯಾ, ಜಿಣ್ಯೆಚೊ ಖೆಳ್ ರಾವನಾ. ಹಾಂವ್ ಸೈಕಲ್ ರಾವವ್ನ್ ಖಂಯ್ ಜಾಯ್ ಥಂಯ್ ವೆಪಾರ್ ಕರಿನ್ ತರ್ ಪೊಲಿಸಾಂಚ್ಯೊ ಗೆವ್ಜಿ, ಕೊರ್ಪೊರೆಶನಾಚಿ ಆಡ್ಕಳ್, ಹಾತಾಕ್ ಮೆಳ್ ಲ್ಲೆ ಬೊಲ್ಸಾಕ್ ವೆಚೆ ಆದಿಂಚ್ ತೆ ವೋಡ್ನ್ ಘೆತಾತ್. 

ಆದ್ಲ್ಯಾಮ್ಹಯ್ ನ್ಯಾಂತ್ ರಾತಿಚೆಂ ಸೈಕಲಾರ್ ಪಾನ್ ತಯಾರ್ ಕರ್ನ್ ಆಸ್ ಲ್ಲೊಂ. ಸ ಜಣ್ ಪಿಯೆಲ್ಲೆ ತರ್ನಾಟೆ ಯೇವ್ನ್ ಭೆಶ್ಟೆಂಚ್ ಝಗ್ಡ್ಯಾಕ್ ರಾವ್ಲೆ. ಸರ್ಸರಿತ್ ಮಾರ್ಲೆಂ. ಉಜ್ವ್ಯಾ ಹಾತಾಕ್ ಕಠೀಣ್ ಮಾರ್ ಜಾಲೊ. ಬೊಲ್ಸಾಂತ್ ೬೦೦೦ ಘೆವ್ನ್ ಹೊಸ್ಪಿಟ್ಲಾಕ್ ಧಾಂವ್ಲೊಂ. ದಾಕ್ತೆರಾನ್ ೪೮೦೦೦ ಚಿಕಿತ್ಸೆಕ್ ವಿಚಾರ್ಲೆ. ಮೆಟಾಂ ದೆಂವುನ್ ಶೀದಾ ಘರಾ ಗೆಲೊಂ. ಬಾಯ್ಲೆಚೆಂ ಕಾನಾಚೆಂ ಆನಿ ಗಳ್ಯಾಚೆಂ ಆಡವ್ ದವರ್ನ್ ದುಸ್ರ್ಯಾ ಹೊಸ್ಪಿಟ್ಲಾಂತ್  ಚಿಕಿತ್ಸಾ ಘೆತ್ಲಿ.  

ಏಕ್ ಉಡಾಸ್ ದವರ್ ರೆ ಚೆಡ್ಯಾ..

ಜಿಣ್ಯೆಕ್ ದಯಾ ದಾಕ್ಷೆಣ್ ನಾ, ತಿ ಸತಯ್ತಾ. ಪುಣ್ ತುವೆಂ ಕೊಣಾಯ್ ಮುಕಾರ್ ಹಾತ್ ವೊಡ್ಡಾವ್ನ್ ರಾವೊಂಕ್ ನಜೊ. ಹೆರಾಂಚ್ಯಾ ಬೊಲ್ಸಾಕ್ ಹಾತ್ ಘಾಲುಂಕ್ ನಜೊ.  ಪ್ರಾಮಾಣಿಕ್ಪಣಾನ್ ಕಾಮ್ ಕಾಮ್ ಕರ್. ಪ್ರಮಾಣಿಕ್ಪಣ್ ಕಾಮೆಲ್ಯಾಚೊ ಕುರೊವ್. ತೊ ಹೊಗ್ಡಾಯ್ಲ್ಯಾರ್ ತ್ಯಾ ಜಾಗ್ಯಾರ್ ಹೆರ್ ಕಿತೆಂ ಬಸಯ್ಲ್ಯಾರೀ ತಕ್ಲಿ ಜಡ್ ಆನಿ ಪಾಡ್!
ಮ್ಹಜಿಂ ಭುರ್ಗಿಂ ಮ್ಹಾಕಾ ಅಭಿಮಾನಾನ್ ಲೆಕ್ತಾತ್ ಕಿತ್ಯಾಕ್ ಹಾಂವ್ ಹಾತ್ ಪಾಂಯ್ ಬಡವ್ನ್ ಘೊಳ್ತಾಂ, ಕೊಣಾಯ್ಚ್ಯಾ ಹಕ್ಕಾಚೆಂ ಲುಟಿನಾ”

ತಿತ್ಲ್ಯಾರ್ ಏಕ್ ಗಿರಾಯ್ಕ್ ಆಯ್ಲೊ. ತಾಕಾ ಪಾನ್ ತಯಾರ್ ಕರುಂಕ್ ಉಟ್ಲೊ ಪಾನ್ ವಾಲಾ. ಗಿರಾಯ್ಕಾಕಡೆ ಮೊವಾಳಾಯೆನ್ ಉಲವ್ನ್ ತಾಕಾ ಪಾನ್ ದಿಂವ್ಚೆ ಭಿತರ್ ಚೆಡೊ ಉಟೊನ್ ಗೆಲ್ಲೊ!
ವೀಸ್-ಪಂಚ್ವೀಸ್ ಮೆಟಾಂ ಪಯ್ಶಿಲ್ಯಾನ್ ತೊ ಚಲೊನ್ ವೆಚೊ ದಿಸ್ಲೊ. ಸವ್ಕಾಸ್ ತಕ್ಲಿ ಪಂದಾ ಘಾಲ್ನ್ ವೆಚ್ಯಾ ಚೆಡ್ಯಾಕ್ ಆಪಂವ್ಕ್ ಪಾನ್ ವಾಲಾಕ್ ಮನ್ ಜಾಲೆಂನಾ.

ಪಾನ್ ವಾಲಾಚೆಂ ಮನ್ ಖಾಲಿ ಜಾಲ್ಲೆಂ, ಬೊವ್ ಶಾ ಚೆಡ್ಯಾಚಾ ಮನಾಂತ್ ವಾದಾಳ್ ಉಟ್ ಲ್ಲೆಂ.


ಬುಧವಾರ, ಜುಲೈ 16, 2014

ಗೋವಿಂದನ ವಚನಗಳು - ಪುಸ್ತಕ ಪರಿಚಯ





ಪುಸ್ತಕ ಪರಿಚಯ


ಗೋವಿಂದನ ವಚನಗಳು


೧೨ ನೇ ಶತಮಾನದಲ್ಲಿ ಶರಣರಿಂದ ರಚಿಸಲ್ಪಟ್ಟ ’ವಚನ ಸಾಹಿತ್ಯ’ ಅಂದಿನ ನಾಗರಿಕತೆಯ ಪ್ರತಿಬಿಂಬ ಎನ್ನಬಹುದೆನೋ! ಕಲ್ಯಾಣ ಪ್ರಾಂತ್ಯದಲ್ಲಿ ಇದ್ದಂತಹ ಮೇಲು-ಕೀಳು ನೀಚತನ, ಆರ್ಥಿಕ-ಸಾಮಾಜಿಕಾ ಅಸಮ್,ಆನತೆ, ಜಾತಿಗಳ ನಡುವೆ ನರಳುತ್ತಿದ್ದ ಮಾನವನ ಜೀವನವನ್ನು ಕುರಿತು ಶರಣರು ಬರೆಯುತ್ತಾ ಹೋದಂತೆ ಜನಸಾಮಾನ್ಯರಲ್ಲಿ ಕ್ರಾಂತಿಯ ಕಿಡಿ ಹೊತ್ತಿಸುವಲ್ಲಿ ಸಫಲರಾಗಿದ್ದು ನಮಗೆ ತಿಳಿದಿದೆ. ವಚನಗಳು ವೈಚಾರಿಕತೆಯನ್ನು ಬೆಳೆಸುವುದರ ಜತೆಗೆ ಮನುಷ್ಯನಲ್ಲಿ ಮಾನವೀಯ ಗುಣಗಳನ್ನು ಬಿತ್ತುವ ಕೆಲಸವನ್ನು ಮಾಡಿವೆ. ಬಸವಣ್ಣಾದಿ ಶರಣರು ಹೊಸ ಧರ್ಮವೊಂದನ್ನು ಹುಟ್ಟು ಹಾಕಲಿಲ್ಲ. ಆದರೆ ಪೂರ್ವಗ್ರಹಪೀಡಿತರಾಗಿರದೆ, ಮತೀಯವಾದವೂ ಇಲ್ಲದೆ ದೈನಂದಿನ ಜೀವನದಲ್ಲಿ ಧರ್ಮ ಸ್ಥಾಪನೆ ಮಾಡುವುದೇ ಅವರ ಉದ್ದೇಶವಾಗಿತ್ತು. ಅವರು ನಡೆದ ದಾರಿಯೇ ಧರ್ಮವಾದರೆ, ಆಡಿದ ಮಾತುಗಳೇ ಸಿದ್ಧಾಂತಗಳು. ವಚನಗಳಲ್ಲಿ ಜನಸಾಮಾನ್ಯನ ನೋವು-ನಲಿವ್ಯ್ ಗಳಿವೆ, ಸಿದ್ಧಾಂತಗಳಿವೆ, ಬಂಡಾಯವೂ ಇದೆ. 


ಇಪ್ಪತ್ತೊಂದನೆ ಶತಮಾನದಲ್ಲಿರುವ ನಮಗೆ ನಾಗರಿಕತೆ ಬೆಳೆಯುತ್ತಿದ್ದಂತೆ ಆತ್ಮ ವಿಮರ್ಶೆಯ ಕೆಲಸ ಕುಂಠಿತಗೊಳ್ಳುತ್ತಿರುವುದು ತಿಳಿದಿರುವ ವಿಚಾರ. ಮಾಧ್ಯಮಗಳು ಆಗಾಗ್ಗೆ ಮಾನವೀಯ ಗುಣಗಳ ಮೇಲೆ ಬೆಳಕು ಚೆಲ್ಲಲು ಯತ್ನಿಸುತ್ತಿದ್ದರೂ ಪರಿಣಾಮಕಾರಿಯಾಗಿ ಯಾವುದೂ ನಡೆಯಿತ್ತಿಲ್ಲ. 


ಕೆಲವೇ ದಿನಗಳ ಹಿಂದೆ ನನ್ನ ಕವಿ ಮಿತ್ರ ಆಂಡ್ರ್ಯೂ ಡಿ’ ಕುನ್ಹಾ ರವರು ಒಂದು ಪುಸ್ತಕವನ್ನು ಪರಿಚಯಿಸಿದರು. ಹೆಸರು – ’ಗೋವಿಂದನ ವಚನಗಳು’.  ಪುಸ್ತಕದ ಒಂದೊಂದೇ ಪುಟಗಳನ್ನು ತೆರೆಯುತ್ತಿದ್ದಂತೆ ಪ್ರಪಂಚವೇ ತೆರೆದು ಬಿಟ್ಟಿತು! ಈ ವಚನಗಳನ್ನು ಬರೆದವರು ಶರಣರಲ್ಲ, ಆದರೂ ಶರಣರ ಸಾಲಿನಲ್ಲಿ ನಿಲ್ಲುವುದು ಖಚಿತ. ಮೂರೇ ಮೂರು ಸಾಲಿನ ವಚನಗಳಲ್ಲಿ ವೈಚಾರಿಕತೆ, ಆಂತರ್ಯದ ವಿಮರ್ಶೆ, ಸಮಾಜದ ಕುಚೋದ್ಯ, ಡಂಭಾಚಾರಗಳು, ರಾಜಕೀಯ ಪೀಕಲಾಟಗಳು, ಅಧರ್ಮದ ಹೊಗೆ, ಸತಾಯಿಸುವ ಮನ, ಸಂಸಾರದ ಸಾರ, ಸತಿ-ಪತಿಗಳ ಸಂಕಟಗಳು, ವಿಕೃತಿಯ ಸಂಸ್ಕೃತಿ... ಇತ್ಯಾದಿ ಶ್ರೀ ರಾಧಾಕೃಷ್ಣ ಕೆ. (ಲೇಕಕರು) ಮನೋಜ್ಞವಾಗಿ ಹಿಡಿದಿಟ್ಟಿದ್ದಾರೆ. ಆಧುನಿಕ ಸಮಾಜದ ಆಗು ಹೋಗುಗಲ ಮೇಲೆ ಸೂಕ್ಷ್ಮವಾಗಿ ಕಣ್ಣಿಟ್ಟು, ಅನಾಚಾರಗಳನ್ನು ಮೆಟ್ಟಿ ನಿಲ್ಲಲು ಸದಾಚಾರವನ್ನು ಕಾಪಾಡಿಕೊಳ್ಳುವ ಸ್ಫೂರ್ತಿ ಚಿಲುಮೆಯನ್ನು ಚಿಮುಕಿಸುವ ಕೆಲಸವನ್ನು ಮಾಡಿದ್ದಾರೆ. 


ಈ ಪುಸ್ತಕಕ್ಕೆ ಮುನ್ನುಡಿಯಿಲ್ಲ, ಸೀದಾ ಸಾದಾ ವಿಚಾರಗಳುಳ್ಳ ’ಗೋವಿಂದನ ವಚನಗಳು’ ಸಂತೆಯಲ್ಲಿ ಮಾರಾಟಕ್ಕೂ ಸಿಗುವುದಿಲ್ಲ. ಪ್ರಚಾರದ ಸೋಗಿಲ್ಲದೆ ಲೇಕಕರು ತಮ್ಮಿಷ್ಟದಂತೆ ಹಂಚುತ್ತಿದ್ದಾರೆ. 


ಕೆಲವು ವಚನಗಳನ್ನು ನೀವೇ ಓದಿಕೊಳ್ಳಿ:



ನಾನೇ ನಾನೇ ಎಂದಾಗ ಬೆಳೆದದ್ದು ಬೃಹತ್ ಆನೆ

ನೀನೇ ನೀನೇ ಎಂದಾಗ ಬೆಳೆದದ್ದು ಭತ್ತದ ತೆನೆ

ನಾ-ನೀ ಅಳಿದ ಮೇಲೆ, ಬರೀ ಸೊನ್ನೆ! ಗೋವಿಂದ.



’ನೀ ಸತ್ತರೂ ಬರುವೆ, ಬಿಡದೆ ನಾ ನಿಮ್ಮ ಬೆನ್ನ ಹಿಂದೆ’

ಇದ್ದಾಗಲೇ ಕೈ ಕೊಟ್ಟು ಹೋದಳು ಇನ್ನೊಬ್ಬರ ಹಿಂದೆ

ನಾಲಗೆಯಂತೆ ಕಾಲಿಲ್ಲವಲ್ಲ, ಜಗದೊಗೆ ಗೋವಿಂದ


ಕುದಿವ ಎಣ್ಣೆ ಬಾಣಲೆಗೆ, ಕೈಯಿಂದ ಬಿಟ್ಟ ಪೂರಿ-

ನಾಲಗೆಯಿಂದ ಕಾರಿದ ಅಹಿತ ನುಡಿಗ ಬುಗರಿ;

ಸಂತೆಯಲಿ ಪಂಚೆ ಉದುರಿದಂತೆ ಗೋವಿಂದ



ಕಾಡು ಹರಟೆಗೆ ಸಿಗುತ್ತಾರೆ ಜನರು ಬೇಕಾದಷ್ಟು

ಗೊತ್ತಾಗುವುದಿಲ್ಲ ಅಮೂಲ್ಯ ಸಮಯ ವೇಷ್ಟು

ಬೂಸ್ಟು ಹಿಡಿದ ಬ್ರೆಡ್ಡಾಗದಿರಲಿ ಬದುಕು ಗೋವಿಂದ



ಅತಿ ಸಲುಗೆ ತರವಲ್ಲ ಗತಿ ತಪ್ಪಿಸುವ ಜನರಿಲ್ಲಿ

ಮತಿ ವಿಕಳರ ಮಾತು ಗುಲ್ಲೆಬ್ಬಿಸುವ ಕಹಿ ಬಳ್ಳಿ

ನೀತಿಯಿದ್ದಲ್ಲಿ ಭೀತಿಯ ಕೋತಿಯಿಲ್ಲ ಗೋವಿಂದ



ಬಲು ರೂಪ, ಅಂತಸ್ತು, ಕೀರ್ತಿಗಳ ಹೊರೆಹೊತ್ತು

ಬಲು ಗತ್ತಿನಲ್ಲಿ ಊರಿಡೀ ಮೆಲುಕಾಡುವ ಗಮ್ಮತ್ತು

ಪೊಗರು ಅತಿಯಾದಾಗ, ಟಗರು ಮುಖ ಗೋವಿಂದ



ಬಗ್ಗಿದ ಬೆನ್ನಿಗೆ ಹೇರುವರು ಭಾರವಾದ ಕಲ್ಲು ಬಂಡೆ

ಕುಗ್ಗಿದವರ ಬೆನ್ನಿನ ಮೇಲಿಡುವರು ಕೊಬ್ಬಿದ ಕುಂಡೆ

ಅಗ್ಗಕ್ಕೆ ಸಿಕ್ಕರೆ ಹಗ್ಗಕ್ಕೆ ಜೋತಾಡಿಸಿದರು ಮಂಡೆ ಗೋವಿಂದ



ದೇವರಿಗೆ ಸಾವಿರ ಅಭಿಷೇಕಗೈದರೂ ಆಗದು

ಗುರುಗಳ ಪಾದ ಪೂಜೆಗೈದರೂ ಆಗದು

ನಿನ್ನ ಶಿಲುಬೆಯ ನೀನೇ ಹೊತ್ತು ಸಾಗಬೇಕು ಗೋವಿಂದ



ಸೆಂಟಿಮೆಂಟು ಅತಿಯಾದರದುವೇ, ಗಂಟಲು ಹಿಡಿವ ಅಂಟು

ಅಂಟು ಬಾಳಿನ ಕಗ್ಗಂಟಾಗಿ, ಮೆಂಟಲಾದ ಕತೆ ನೂರಾರುಂಟು

ಸೆಂಟಿನಲ್ಲೇ ಅಂಗಿಯನ್ನೊಗೆಯುವ ತುಂಟಾಟವದು ಗೋವಿಂದ



ಕೂಡಿ ಬಾಳೋಣ ಹಿಂದಿನ ಮಾತು, ಈಗ ಕೂಡಿಟ್ಟು ಬಾಳೋಣ

ಕೂಡಿಡಲಾಗದಿದ್ದರೆ, ಅವರಿವರ ಕೂಡಿಟ್ಟ ಹಣವನ್ನೆಳೆಯೋಣ

ಕಾಡು ಮನಸ್ಸಿಗೆ, ಸದಾ ಕಾಡೂವ ಕೋಡಿದೆ ಗೋವಿಂದ