ಬುಧವಾರ, ಜುಲೈ 13, 2016

ಚಿತ್ರ-ಕಾವ್ಯ: ಒಂದ್ನಿಮಿಷ


























ಒಂದ್ನಿಮಿಷ
ನಾನು ಹಿಂತಿರುಗಿ ನೋಡೇ ಬಿಡುತ್ತೇನೆ

ಹೌದು, ನೋಡಲೇ ಬೇಕು
ನನ್ನ ಮನೆಯನ್ನೊಮ್ಮೆ
ಸಂಜೆ ಶಾಲೆಯಿಂದ ಹಿಂತಿರುಗುವ ಮುನ್ನ
ಅದು ಅಲ್ಲಿದ್ದರೆ ನಮ್ಮ ಪುಣ್ಯ

ಶಾಲೆಗೆ ಹೋಗುತ್ತಿದ್ದೇವೆ
ಸಾಲಾಗಿ ನಿಂತು ರಾಷ್ಟ್ರಗೀತೆ ಹಾಡುತ್ತೇವೆ
ಮುಗಿದ ತಕ್ಷಣ ಹೃದಯ
ಮನೆಯನ್ನು, ಅಮ್ಮನನ್ನು, ಅಪ್ಪನನ್ನು
ಹಾಲುಗಲ್ಲದ ತಮ್ಮನನ್ನು ನೆನೆಯುತ್ತಿರುತ್ತದೆ.

ಏನೋ ಯುದ್ದವಂತೆ
ಎರಡು ಆಲದ ಮರಗಳ ನಡುವೆ
ಬುಡದಲ್ಲಿ ಮಂಜಿಗೆ ಚಿಗುರಿ ನಿಂತ
ಪಚ್ಚೆ ಹುಲ್ಲು ಅವರ ಕಾಲಡಿ ಸತ್ತು ಹೋಗುತ್ತದೆ,
ಅವುಗಳಿಗೆಲ್ಲಿ ಅಂತ್ಯ ಸಂಸ್ಕಾರ?

ತಿರುಗಿ ನೋಡುವುದು
ಅಬ್ಬಾಜಾನ್'ಗೆ ಇಷ್ಟವಿಲ್ಲ,
ತಲೆ ಸವರಿ ಕಳಿಸುತ್ತಾನೆ
ಕಿವಿಯಲ್ಲುಸುರಿ ಒಂದು ಮಾತು -
ಹೋಗು, ನೀನಾದರೂ ಮನುಷ್ಯಳಾಗು!'


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ