ಶನಿವಾರ, ಜುಲೈ 23, 2016

ಚಿತ್ರ-ಕಾವ್ಯ: ಆಕೆ






ಹಾರೆ ಎಂದಿತು,
ಆಕೆಯ ಬಿಗಿ ಹಿಡಿತ
ನನ್ನ ಉಸಿರುಗಟ್ಟಿಸಿತು ಕಣೋ,
ಹಸಿವೆಂದರಷ್ಟೂ ಕ್ರೂರವೇ


ಬುಟ್ಟಿ ಮಾತಾಡಿತು,
ಆಕೆ ತಲೆ ಮೇಲೆ ಕೂತರಂತೂ
ಒಲೆಮೇಲಿನ ಉರಿ ಕಣೋ,
ಬದುಕೇಕೆ ವಿಕೃತ


ಬುತ್ತಿ ಅತ್ತಿತು,
ಅವಳು ಉಣುವುದಿಷ್ಟೇ,
ಮೊಲೆಯುಣಿಸುವ ಸಲುವಾಗಿ..
ದೇವನೇಕೋ ಸುರಿದಿಹ
ಒಂದು ಕಣ್ಣಿಗೆ ಸುಣ್ಣ
ಇನ್ನೊಂದಕೆ ಮಣ್ಣ


ಆಕಾಶ ಪಿಸುಗುಟ್ಟಿತು,
ಸುಮ್ಮನಿರರ್ಪ್ಪಾ.
ಸುಖನಿದ್ದೆಗೆಡಿಸಬೇಡಿ
ಅವರದದೊಂದೇ ಆಸ್ತಿನ

ಕಸಿದುಕೊಳ್ಳಬೇಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ