ಶನಿವಾರ, ಸೆಪ್ಟೆಂಬರ್ 24, 2016

ಕವಿತೆ: ನೀರು

ನೀರು


ಮಟಮಟ ಮಧ್ಯಾಹ್ನ
ಊರೂರು ಅಲೆದು ಸುಸ್ತಾಗಿ
ತೊಟ್ಟು ನೀರಿಗಾಗಿ ಹುಡುಕಿದಾಗ
 ರಸ್ತೆ ಪಕ್ಕದ ನಲ್ಲಿಯೊಂದರ ಬುಡದಲ್ಲಿ
ಪಸೆ ಕಂಡು ಓಡಿದೆ

ಬೊಗಸೆಯಲ್ಲಷ್ಟು 
ನೀರು ತುಂಬಿಕೊಂಡು ತಲೆ ಎತ್ತಿದರೆ
ಅರೆ.....
ಪಕ್ಕದಲ್ಲೊಂದು ನಾಯಿ
ಕೊಂಬೆ ಮೇಲೆ ಕಾಗೆ
ಪೊಟರೆಯೊಳಗೆ ಅಳಿಲು
ದಿಟ್ಟಿಸಿ ನನ್ನನ್ನೆ ನೋಡುತ್ತಿದ್ದವು!

 ಹಸಿದವರ ಮುಂದೆ
ಊಟ ಮಾಡಲಾಗದೆ ಬುತ್ತಿ ಮರಳಿ
ಬ್ಯಾಗಿಗೆ ತುರುಕಿ ಕಿಟಕಿಯ ಹೊರಗೆ ನೋಡುವ
ರೈಲು ಪ್ರಯಾಣಿಕನಂತೆ
ಬೊಗಸೆ ನೀರು
ಗಿಡವೊಂದಕ್ಕೆ ಸುರಿದು ಮುನ್ನಡೆದೆ

1 ಕಾಮೆಂಟ್‌: